'ಬಿಗ್ ಬಾಸ್' ಮನೆಯೊಳಗೆ ಇದೇ ಮೊದಲ ಬಾರಿಗೆ ಜನಸಾಮಾನ್ಯರು ಕಾಲಿಟ್ಟಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಕಾಮನ್ ಮ್ಯಾನ್ ಸ್ಪರ್ಧಿಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಒಂದೇ ಮನೆಯಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಜನಸಾಮಾನ್ಯರು ಹೇಗೆ ಹೊಂದಾಣಿಕೆ ಮಾಡಿಕೊಂಡು ಇರಬಹುದು ಎಂದು ಕುತೂಹಲದಿಂದ 'ಬಿಗ್ ಬಾಸ್' ನೋಡುತ್ತಿರುವ ವೀಕ್ಷಕರಿಗೆ ಮೇಲ್ನೋಟಕ್ಕೆ 'ದೊಡ್ಮನೆ' ಇಬ್ಭಾಗವಾದಂತೆ ಕಾಣುತ್ತಿದೆ. ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಒಂದು ಗುಂಪಾಗಿದ್ದರೆ, ಜನಸಾಮಾನ್ಯ ಸ್ಪರ್ಧಿಗಳೇ ಇನ್ನೊಂದು ಗುಂಪಾಗಿರುವಂತೆ ಕಾಣುತ್ತಿದೆ.ಮೇಘ ಜೊತೆ ಸೆಲೆಬ್ರಿಟಿ ಸ್ಪರ್ಧಿಗಳ ಮಾತುಕತೆ ಅಷ್ಟಕಷ್ಟೆ. ಒಂದು ವೇಳೆ ಮಾತುಕತೆ ಆದರೂ, ಆಕೆಯ ನಡವಳಿಕೆ ಬದಲಾಗಬೇಕು ಎಂದು ಸೆಲೆಬ್ರಿಟಿ ಸ್ಪರ್ಧಿಗಳು ಸೂಚಿಸುತ್ತಾರೆ ಹೊರತು ಎಂದಿನಂತೆ ಮಾತನಾಡುವುದು, ಹರಟುವುದು ಕಮ್ಮಿಯೇ.ಆಕೆಯ ಪಾಲಿನ ಹಣ್ಣು ತೆಗೆದುಕೊಂಡು ತಿಂದಾಗಲೂ, ತೇಜಸ್ವಿನಿ ಆಕೆಯನ್ನ (ಮೇಘ) ಪ್ರಶ್ನೆ ಮಾಡುತ್ತಾರೆ. ''ನಿನಗೆ ಹೇಳಿದ್ರಾ ತೆಗೆದುಕೊಂಡು ತಿನ್ನೋಕೆ.?'' ಎಂದು ಮೇಘರಿಗೆ ಪ್ರಶ್ನೆ ಮಾಡಿದಂತೆ ಸೆಲೆಬ್ರಿಟಿಗಳು ತಮ್ಮ ತಮ್ಮಲ್ಲಿ ಪ್ರಶ್ನೆ ಮಾಡಿಕೊಳ್ಳುತ್ತಾರಾ.? ವೀಕ್ಷಕರ ಕಣ್ಣಿಗಂತೂ ಅದೆಲ್ಲ ಬಿದ್ದಿಲ್ಲ.!
Bigg Boss Kannada 5: Celebrity contestants targets Common People. Big Boss viewers are dissapointed as celebrities are targeting common people. Celebrities fights with them for no reason which is not fair, says viewers.